ಜ್ಞಾನದ ನಕ್ಷೆ

A living atlas of Kannada and Indian wisdom

28 entries · Basavanna · 12th century Karnataka

Vachanaಬಸವಣ್ಣ
ಅಡವಿಯಲೊಬ್ಬ ಕಡು ನೀರಡಿಸಿ ಎಡೆಯಲ್ಲಿ ನೀರ ಕಂಡಂತಾುತ್ತಯ್ಯಾ ಕುರುಡ ಕಣ್ಣ ಪಡೆದಂತೆ ಬಡವ ನಿಧಾನವ ಹಡೆದಂತಾುತ್ತಯ್ಯಾ ನಮ್ಮ ಕೂಡಲಸಂಗನ ಶರಣರ ಬರವೆನ್ನ ಪ್ರಾಣ ಕಂಡಯ್ಯಾ

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಟ್ಟಟ್ಟಿಕೆಯ ಮಾತನಾಡಲದೇಕೋ ಮುಟ್ಟಿ ಬಂದುದಕ್ಕಂಜಲದೇಕೋ ಕಾದಿದಲ್ಲದೆ ಮಾಣೆನು ಓಡಿದಡೆ ಭಂಗ ಹಿಂಗದಾಗಿ ಕೂಡಲಸಂಗಮದೇವಾ ಎನ್ನ ಭಂಗ ನಿಮ್ಮದಾಗಿ.

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಜ್ಞಾನ ಹಿಂಗಿತ್ತು ಅಹಂಕಾರವಡಗಿತ್ತು ಅರಿಷಡ್ವರ್ಗಂಗಳು ಹರಿಹಂಚಾದವು ಅಷ್ಟಮದಂಗಳು ಪಟ್ಟಪರಿಯಾದವು ದಶವಾಯುಗಳು ವಶವರ್ತಿಯಾದವು ಇಂದ್ರಿಯಂಗಳು ಬಂಧನವಡೆದವು ಮನೋವಿಕಾರ ನಿಂದಿತ್ತು. ಕೂಡಲಸಂಗಮದೇವಾ ನಿಮ್ಮಲ್ಲಿ ನಮ್ಮ ಮಹಾದೇವಿಯಕ್ಕಗಳ ನಿರ್ವಾಣದ ಸಹಜ ನಿಲವ ಕಂಡು ನಮೋ ನಮೋ ಎನುತಿರ್ದೆನಯ್ಯಾ ಪ್ರಭುವೆ.

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಚ್ಚಿಗವೇಕಯ್ಯಾ ಸಂಸಾರದೊಡನೆ ? ನಿಚ್ಚನಿಚ್ಚ ಶಿವರಾತ್ರಿಯ ಮಾಡುವುದು ಬೇಗ ಬೇಗ ಅರ್ಚನೆ-ಪೂಜನೆಯ ಮಾಡುವುದು ಕೂಡಲಸಂಗನ ಕೂಡುವುದು. 173

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಚ್ಚ ಶರಣರು ನಿಮ್ಮ ನಿಚ್ಚ ನೆನೆವರು, ಬಚ್ಚ ಬರಿಯ ಮಾತನಾಡುವೆನು. ಒಪ್ಪಚ್ಚಿ ಅರೆಭಕ್ತಿ, ನೆನೆಯಲೀಯದು ನಿಮ್ಮ. ಮೆಚ್ಚರು ನಿಮ್ಮವರು ಎನ್ನನು ಕೂಡಲಸಂಗಮದೇವಾ.

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಗ್ಫವಣಿಯವಸರ ಸದಾಚಾರ ಸತ್ಕ್ರೀಯೆಂಬ ಭೂಮಿಯ ಮೇಲೆ ಸರ್ವಶುದ್ಧವೆಂಬ ಗೋಮಯವ ತಂದು ವಿನಯಾರ್ಥವೆಂಬ ಉದಕದಿಂದ ಸಮ್ಮಾರ್ಜನೆಯಂ ಮಾಡಿ ತನುವಿನ ಅವಗುಣಂಗಳಂ ಹುಡಿಗುಟ್ಟಿ ರಂಗವಾಲೆಯನಿಕ್ಕಿ ಅಕ್ಷಯವೆಂಬ ಬಿಂದಿಗೆಯಲ್ಲಿ ಪರಮಾನಂದವೆಂಬ ಅಗ್ಫವಣಿಯ ತುಂಬಿ ಸಮರಸದಿಂದ ಮಜ್ಜನಕ್ಕೆರೆಯಲು ಹೃದಯಕಮಲವೆಂಬ ಪುಷ್ಪಮಂ ಸಲಿಸಿ ಸೌಖ್ಯತರ ಶಾಂತಿಯೆಂಬ ಗಂಧವನಿಟ್ಟು ಅಕ್ಷಯವೆಂಬ ಅಕ್ಷತೆಯನಳವಡಿಸಿ ಸದ್ಭಾವವೆಂಬ ಧೂಪಮಂ ಬೀಸಿ ಸುಜ್ಞಾನವೆಂಬ ನಿವಾಳಿಯನೆತ್ತಿ ನಿತ್ಯನಿರಂಜನವೆಂಬ ನೀರಾಜನಮಂ ಬೆಳಗಲು ಬ್ರಹ್ಮನಾದವೆಂಬ ಘಂಟೆಯಂ ಬಾರಿಸಲು ನಿತ್ಯಲಿಂಗಾರ್ಚನೆಗೆಡೆಮಾಡಲು ಇದರ ವರ್ಮಕರ್ಮಸ್ಥಿತಿಯನರಿದು ಶಿವಲಿಂಗಾರ್ಚನೆಯ ಮಾಡಬಲ್ಲಡೆ ಮತ್ರ್ಯದಲ್ಲಿ ನಾನಾರನೂ ಕಾಣೆನು. ಕೂಡಲಸಂಗಮದೇವಾ ಪ್ರಭು ಶಿವಲಿಂಗಾರ್ಚನೆಯಂ ಮಾಡಲು ನಾನೆ ಪರಿಚಾರಕನು.

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಕಟಕಟಾ ಬೆಡಗು ಬಿನ್ನಾಣವೆಂಬುದೇನೊ ! ಓಂ ನಮಃ ಶಿವಾಯ ಎಂಬುದೇ ಮಂತ್ರ ಓಂ ನಮಃ ಶಿವಾಯ ಎಂಬುದೇ ತಂತ್ರ ನಮ್ಮ ಕೂಡಲಸಂಗಮದೇವರ ನೆನೆವುದೆ ಮಂತ್ರ. 77

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಂಧಕಾರವೆಂಬ ಗಹ್ವರದೊಳಗೆ ನಿದ್ರೆಯೆಂಬ ರಾಕ್ಷಸಿ ಗ್ರಹಿಸಿ ವೀರರ ನಿಗ್ರಹಿಸಿ ನೀರು ಮಾಡಿ, ಧೀರರ ಧೃತಿಗೆಡಿಸಿ ಶಾಪಾನುಗ್ರಹಸಮರ್ಥರ ಸತ್ತಂತಿರಿಸಿ ನಿಚ್ಚ ನಿಚ್ಚ ಜೀವನಾಶವ ಮಾಡುತ್ತಿಹಳು ನೋಡಾ ಕೂಡಲಸಂಗಮದೇವಾ

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಂಧಕಾರವೆಂಬ ಗಹ್ವರದೊಳಗೆ ನಿದ್ರೆಯೆಂಬ ರಾಕ್ಷಸಿ ಗ್ರಹಿಸಿ ವೀರರ ನಿಗ್ರಹಿಸಿ ನೀರು ಮಾಡಿ ದ್ಥೀರರ ಧೃತಿಗೆಡಿಸಿ ಶಾಪಾನುಗ್ರಹಸಮರ್ಥರ ಸತ್ತಂತಿರಿಸಿ ನಿಚ್ಚ ನಿಚ್ಚ ಜೀವನಾಶವ ಮಾಡುತ್ತಿಹಳು ನೋಡಾ ಕೂಡಲಸಂಗಮದೇವಾ.

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಂಗಯ್ಯ ಒಳಗಣ ಲಿಂಗವ ನೋಡುತ್ತ ಕಂಗಳು ಕಡೆಗೋಡಿವರಿಯುತ್ತ ಸುರಿಯುತ್ತ ಎಂದಿಪ್ಪೆನೊ ನೋಟವೆ ಪ್ರಾಣವಾಗಿ ಎಂದಿಪ್ಪೆನೊ ಕೂಟವೇ ಪ್ರಾಣವಾಗಿ ಎಂದಿಪ್ಪೆನೊ ಎನ್ನ ಅಂಗವಿಕಾರದ ಸಂಗವಳಿದು ಕೂಡಲಸಂಗಯ್ಯಾ ಲಿಂಗ ಲಿಂಗವೆನುತ್ತ.

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಂಗಯ್ಯ ಒಳಗಣ ಲಿಂಗವ ನೋಡುತ್ತ ಕಂಗಳು ಕಡೆಗೋಡಿವರಿಯುತ್ತ ಸುರಿಯುತ್ತ ಎಂದಿಪ್ಪೆನೊ ನೋಟವೆ ಪ್ರಾಣವಾಗಿ ಎಂದಿಪ್ಪೆನೊ ಕೂಟವೇ ಪ್ರಾಣವಾಗಿ ಎಂದಿಪ್ಪೆನೊ ಎನ್ನ ಅಂಗವಿಕಾರದ ಸಂಗವಳಿದು ಕೂಡಲಸಂಗಯ್ಯಾ ಲಿಂಗ ಲಿಂಗವೆನುತ್ತ. 485

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಂಗದಿಚ್ಛೆಗೆ ಮದ್ಯಮಾಂಸವ ತಿಂಬರು ಕಂಗಳಿಚ್ಛೆಗೆ ಪರವಧುವ ನೆರೆವರು. ಲಿಂಗಲಾಂಛನಧಾರಿಯಾದಲ್ಲಿ ಫಲವೇನು ಲಿಂಗಪಥವ ತಪ್ಪಿ ನಡೆವವರು ಜಂಗಮಮುಖದಿಂದ ನಿಂದೆ ಬಂದಡೆ ಕೊಂಡ ಮಾರಿಂಗೆ ಹೋಹುದು ತಪ್ಪದು ಕೂಡಲಸಂಗಮದೇವಾ. 106

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಂಗದಿಚ್ಛೆಗೆ ಮದ್ಯಮಾಂಸವ ತಿಂಬರು ಕಂಗಳಿಚ್ಛೆಗೆ ಪರವಧುವ ನೆರೆವರು. ಲಿಂಗಲಾಂಛನಧಾರಿಯಾದಲ್ಲಿ ಫಲವೇನು ಲಿಂಗಪಥವ ತಪ್ಪಿ ನಡೆವವರು ಜಂಗಮಮುಖದಿಂದ ನಿಂದೆ ಬಂದಡೆ ಕೊಂಡ ಮಾರಿಂಗೆ ಹೋಹುದು ತಪ್ಪದು ಕೂಡಲಸಂಗಮದೇವಾ. 106

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಂಗದಲ್ಲಿ ಲಿಂಗಸಂಗ, ಲಿಂಗದಲ್ಲಿ ಅಂಗಸಂಗವ ಮಾಡಿಹೆನೆಂದಡೆ, ಸಂದು ಭೇದವಳಿವ ಪರಿ ಎಂತು ಹೇಳಾ ಅಂಗದಲ್ಲಿ ಸಂಗವ ಮಾಡಿಹೆನೆಂದಡೆ, ಮುಂದುಗೆಡಿಸಿ ಕಾಡುವನು ಶಿವನು. ಕಾಮವೆಂಬ ಬಯಕೆಯಲ್ಲಿ ಅಳಲಿಸುವ ಬಳಲಿಸುವ ಶಿವನು. ಲಿಂಗದಲ್ಲಿ ಅಂಗವ ತಂದು ನಿಕ್ಷೇಪಿಸಿಹೆನೆಂದಡೆ, ಅಂಗದಿಂದ ಅತ್ತತ್ತಲೋಸರಿಸಿ ಓಡುವನಯ್ಯಾ ಶಿವನು. ಹೆಣ್ಣು ಗಂಡಾದಡೆ ಸಂಗಕ್ಕೆ ಒಲಿವನು ಕೇಳಾ ಶಿವನು. ಕೂಡಲಸಂಗಮದೇವರ ಬೆರಸುವಡೆ, ಬ್ಥಿನ್ನವಿಲ್ಲದೆ ಕಲಿಯಾಗಿರಬೇಕು ಕೇಳಾ ಅವ್ವಾ.

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಂಗದಲ್ಲಿ ಲಿಂಗಸಂಗ ಲಿಂಗದಲ್ಲಿ ಅಂಗಸಂಗವ ಮಾಡಿಹೆನೆಂದಡೆ ಸಂದು ಭೇದವಳಿವ ಪರಿ ಎಂತು ಹೇಳಾ ಅಂಗದಲ್ಲಿ ಸಂಗವ ಮಾಡಿಹೆನೆಂದಡೆ ಮುಂದುಗೆಡಿಸಿ ಕಾಡುವನು ಶಿವನು. ಕಾಮವೆಂಬ ಬಯಕೆಯಲ್ಲಿ ಅಳಲಿಸುವ ಬಳಲಿಸುವ ಶಿವನು. ಲಿಂಗದಲ್ಲಿ ಅಂಗವ ತಂದು ನಿಕ್ಷೇಪಿಸಿಹೆನೆಂದಡೆ ಅಂಗದಿಂದ ಅತ್ತತ್ತಲೋಸರಿಸಿ ಓಡುವನಯ್ಯಾ ಶಿವನು. ಹೆಣ್ಣು ಗಂಡಾದಡೆ ಸಂಗಕ್ಕೆ ಒಲಿವನು ಕೇಳಾ ಶಿವನು. ಕೂಡಲಸಂಗಮದೇವರ ಬೆರಸುವಡೆ ಬ್ಥಿನ್ನವಿಲ್ಲದೆ ಕಲಿಯಾಗಿರಬೇಕು ಕೇಳಾ ಅವ್ವಾ.

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಂಗದಲ್ಲಿ ಅರ್ಪಿತವಾದ ಸುಖವು ಲಿಂಗದಲ್ಲಿ ಲೀಯವಾಯಿತ್ತೆಂದಡೆ ಅಂಗವ ಲಿಂಗದಲ್ಲಿ ಮತ್ತೆ ನಿಕ್ಷೇಪಿಸಿಹೆನೆಂಬ ಕಾರಣವೇಕಯ್ಯಾ ಶರಣಂಗೆ ಪ್ರಾಣನ ಲಿಂಗದಲ್ಲಿ ಸವೆಸಿ ನಿರವಯವಾಗಬಹುದಲ್ಲದೆ ಕರ್ಮದಿಂದಾದ ಕಾಯವ ಸವೆಸಿ ಸಯವಪ್ಪ ಪರಿ ಎಂತು ಹೇಳಯ್ಯಾ ಕೂಡಲಸಂಗಮದೇವಾ, ನಿಮ್ಮ ಶರಣರು ಕಾಯವಿಡಿದಿರ್ದು ನಿರ್ಮಾಯವಾಗಿರ್ಪುದ ಹೇಳಯ್ಯಾ ನಿಮ್ಮ ಧರ್ಮ.

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಸ್ಥಾವರದೈವಕ್ಕೆರಗಲಾಗದು. ತನ್ನ ಪುರುಷನ ಬಿಟ್ಟು ಅನ್ಯಪುರುಷನ ಸಂಗ ಸಲ್ಲುವುದೇ ರಿ ಕರಸ್ಥಲದ ದೇವನಿದ್ದಂತೆ ಧರೆಯ ಮೇಲಣ ಪ್ರತಿಷ್ಠೆಗೆರಗಿದಡೆ ನರಕದಲ್ಲಿಕ್ಕುವ ಕೂಡಲಸಂಗಮದೇವ

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಸ್ಥಾವರದೈವಕ್ಕೆರಗಲಾಗದು. ತನ್ನ ಪುರುಷನ ಬಿಟ್ಟು ಅನ್ಯಪುರುಷನ ಸಂಗ ಸಲ್ಲುವುದೇ ರಿ ಕರಸ್ಥಲದ ದೇವನಿದ್ದಂತೆ ಧರೆಯ ಮೇಲಣ ಪ್ರತಿಷ್ಠೆಗೆರಗಿದಡೆ ನರಕದಲ್ಲಿಕ್ಕುವ ಕೂಡಲಸಂಗಮದೇವ.

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಂಗದ ಮೇಲೆ ಲಿಂಗ ಆಯತವಾಗಿ ಲಿಂಗಾರ್ಚನೆಯ ಮಾಡಿದಡೆ ಭವ ಹಿಂಗದೆಂದು ಪ್ರಾಣದ ಮೇಲೆ ಲಿಂಗ[ಸ್ವಾ]ಯತವ ಮಾಡಿ ಎನ್ನಂತರಂಗ ಶುದ್ಧವ ಮಾಡಿ ಲಿಂಗೈಕ್ಯದ ಹೊಲಬ ತೋರಿದನಯ್ಯಾ ಚೆನ್ನಬಸವಣ್ಣನು. ಕಾಯದ ಕಳವಳವು ದಾಸೋಹದ ಮುಖದಲ್ಲಿ ಅಲ್ಲದೆ ಹರಿಯದೆಂದು ಜಂಗಮಮುಖಲಿಂಗವಾಗಿ ಬಂದು ಎನ್ನ ಶಿಕ್ಷಿಸಿ ರಕ್ಷಿಸಿ ಎನ್ನ ಸಂಸಾರದ ಪ್ರಕೃತಿಯ ಹರಿದನಯ್ಯಾ ಪ್ರಭುದೇವರು. ಕೂಡಲಸಂಗಮದೇವರಲ್ಲಿ ಪ್ರಭುದೇವರ ಚೆನ್ನಬಸವಣ್ಣನ ಕರುಣದಿಂದಲಾನು ಬದುಕಿದೆನು.

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಂಗದ ಮೇಲಣ ಲಿಂಗ ಹಿಂಗಿ ಬಂದ ಸುಖವನಾರಿಗರ್ಪಿಸುವೆ ಹಿಂಗಲಾಗದು, ಭಕ್ತಿಪಥಕ್ಕೆ ಸಲ್ಲದಾಗಿ, ಹಿಂಗಲಾಗದು, ಶರಣಪಥಕ್ಕೆ ಸಲ್ಲದಾಗಿ, ಕೂಡಲಸಂಗಮದೇವರ ಹಿಂಗಿ ನುಂಗಿದುಗುಳು ಕಿಲ್ಬಿಷ.

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಂಗದ ಮೇಲಣ ಲಿಂಗ ಹಿಂಗಿ ಬಂದ ಸುಖವನಾರಿಗರ್ಪಿಸುವೆ ಹಿಂಗಲಾಗದು ಭಕ್ತಿಪಥಕ್ಕೆ ಸಲ್ಲದಾಗಿ ಹಿಂಗಲಾಗದು ಶರಣಪಥಕ್ಕೆ ಸಲ್ಲದಾಗಿ ಕೂಡಲಸಂಗಮದೇವರ ಹಿಂಗಿ ನುಂಗಿದುಗುಳು ಕಿಲ್ಬಿಷ.

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಂಗದ ನಮಾಫಟವು ಸಿಂಗದ ಗಾತ್ರವು ಹಿಂಗದು ಮನದಲ್ಲಿ ನಾನಾ ವಿಕಾರವು. ಬಂದೆಹೆನೆಂದರಿಯಲಿಲ್ಲಾಗಿ ಸಂದೇಹ ಬಿಡದಾಗಿ ಮುಂದುಗಾಣದು ಲೋಕ ಬೆಂದ ಮಾಯಕ್ಕಂಜಿ ನಿಮ್ಮ ಮರೆವೊಕ್ಕೆ ಕೂಡಲಸಂಗಮದೇವಾ. 42

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಂಗದ ನಮಾಫಟವು ಸಿಂಗದ ಗಾತ್ರವು ಹಿಂಗದು ಮನದಲ್ಲಿ ನಾನಾ ವಿಕಾರವು. ಬಂದೆಹೆನೆಂದರಿಯಲಿಲ್ಲಾಗಿ ಸಂದೇಹ ಬಿಡದಾಗಿ ಮುಂದುಗಾಣದು ಲೋಕ ಬೆಂದ ಮಾಯಕ್ಕಂಜಿ ನಿಮ್ಮ ಮರೆವೊಕ್ಕೆ ಕೂಡಲಸಂಗಮದೇವಾ. 42

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಂಕವೋಡಿದಡೆ ತೆತ್ತಿಗಂಗೆ ಭಂಗವಯ್ಯಾ ಕಾದಿ ಗೆಲಿಸಯ್ಯಾ ಎನ್ನನು. ಕಾದಿ ಗೆಲಿಸಯ್ಯಾ ಕೂಡಲಸಂಗಮದೇವಯ್ಯಾ ಎನ್ನ ತನು ಮನ ಧನದಲ್ಲಿ ವಂಚನೆುಲ್ಲದೆ.

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಂಕ ಕಳನೇರಿ ಕೈಮರೆದಿರ್ದಡೆ ಮಾರಂಕ ಬಂದಿರಿವುದ ಮಾಬನೆ ನಿಮ್ಮ ನೆನಹ ಮನ ಮರೆದಿರ್ದಡೆ ಮಾಯೆ ತನುವನಂಡಲೆವುದ ಮಾಬುದೆ ಕೂಡಲಸಂಗಯ್ಯನ ನೆನೆದಡೆ, ಪಾಪ ಉರಿಗೊಡ್ಡಿದರಗಿನಂತೆ ಕರಗುವುದಯ್ಯಾ.

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಅಂಕ ಕಂಡಾ ಕೋಲಾಸೆ ಮತ್ತೇಕಯ್ಯಾ ಲೆಂಕ ಕಂಡಾ ಪ್ರಾಣದಾಸೆ ಮತ್ತೇಕಯ್ಯಾ ಭಕ್ತ ಕಂಡಾ ತನುಮನಧನದಾಸೆ ಮತ್ತೇಕಯ್ಯಾ ನಿಮ್ಮ ಅಂಕೆಗೆ ಝಂಕೆಗೆ ಶಂಕಿತನಾದಡೆ ಎನ್ನ ಲೆಂಕತನಕ್ಕೆ ಹಾನಿ ಕೂಡಲಸಂಗಮದೇವಾ.

ಅನುವಾದ ಬರಲಿದೆ · Translation coming soon

Vachanas of Basavanna
Vachanaಬಸವಣ್ಣ
ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯಾ ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯಾ ಕೂಡಲಸಂಗಮದೇವಾ ಕೇಳಯ್ಯಾ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

The rich build temples for Shiva. What can I build, Lord — I am poor. My legs are the pillars, my body the shrine, my head the golden dome. Listen, Lord Kudala Sangama: things that stand will fall, but what moves lives on.

devotionequalityimpermanencehumility
Vachanas of Basavanna
Tripadiಸರ್ವಜ್ಞ
ಸಾಲವನು ಕೊಂಬಾಗ ಹಾಲೋಗರುಂಡಂತೆ ಸಾಲಿಗರು ಕೊಂಡು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ

Taking a loan is sweet — like a meal of rice and milk. But when the lender comes to collect and drags it back from you, it is as if a rib in your side were snapped at the joint.

prudenceself-restraintconsequencesforesight
Sarvajnana Vachanagalu (Tripadigalu)